ತೆಲಿಕೆದ ಬೊಳ್ಳಿ ಎಂಬುದು ೨೦೧೨ನೇ ಇಸವಿಯಲ್ಲಿ ಬಿಡುಗಡೆಯಾದ ತುಳು ಹಾಸ್ಯ ಸಿನಿಮಾವಾಗಿದೆ. ಪಿ.ಹೆಚ್.ವಿಶ್ವನಾಥ್‌ ರವರು ಈ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ.ಇದರಲ್ಲಿ ದೇವದಾಸ್ ಕಾಪಿಕಾಡ್ , ಅರ್ಜುನ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರ್, ಸಂದೀಪ್ ಶಟ್ಟಿ ಮತ್ತು ಮೋಹನ್ ರೈ ಇವರು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಸುಧೀರ್ ಕಾಮತ್ ಮತ್ತು ಶರ್ಮಿಳಾ ಕಾಪಿಕಾಡ್ ಈ ಚಿತ್ರದ ನಿರ್ಮಾಣಕಾರರು.ಈ ಚಿತ್ರವು ಮಂಗಳೂರು, ಉಡುಪಿ, ಕಾರ್ಕಳ, ಬೆಳ್ತಂಗಡಿ ಮತ್ತು ಮೂಡುಬಿದಿರೆಯಲ್ಲಿ ಡಿಸೆಂಬರ್ ೬ ,೨೦೧೨ ರಂದು ಏಕಕಾಲದಲ್ಲಿ ಬಿಡುಗಡೆಯಾಯಿತು. = ಪಾತ್ರಗಳು = ದೇವದಾಸ್ ಕಾಪಿಕಾಡ್. ಅರ್ಜುನ್ ಕಾಪಿಕಾಡ್. ನವೀನ್ ಡಿ. ಪಡಿಲ್. ಅರವಿಂದ್ ಬೋಳಾರ್. ಗೋಪಿನಾಥ್ ಭಟ್. ಭೋಜರಾಜ್ ವಾಮಂಜೂರ್. ಸಂದೀಪ್ ಶಟ್ಟಿ. = ಉಲ್ಲೇಖಗಳು =